ಈ ಯೋಜನೆಯಡಿ ಮಹಿಳೆಯರಿಗೆ 50 ಸಾವಿರ ಸಾಲ ಸಿಗುತ್ತೆ.! 25 ಸಾವಿರ ಮರುಪಾವತಿ ಮಾಡಿದರ ಸಾಕು.! 25 ಸಾವಿರ ಫ್ರೀ

Spread the love
WhatsApp Group Join Now
Telegram Group Join Now

Shrama Shakthi Scheme : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ 50000 ಹಣವನ್ನು ಪಡೆಯಬಹುದು ಹಾಗೂ 25000 ಮರುಪಾವತಿ ಮಾಡಿದರೆ ಸಾಕು ಉಳಿದ 25000 ಹಣ ನಿಮಗೆ ಉಚಿತವಾಗಿ ಸಿಗುತ್ತೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ

ಶ್ರಮ ಶಕ್ತಿ ಯೋಜನೆ Shrama Shakthi Scheme

ಈ ಯೋಜನೆಯಡಿ ಮಹಿಳೆಯರಿಗೆ 50 ಸಾವಿರ ಸಾಲ ಸಿಗುತ್ತೆ.! 25 ಸಾವಿರ ಮರುಪಾವತಿ ಮಾಡಿದರ ಸಾಕು.! 25 ಸಾವಿರ ಫ್ರೀ Shrama Shakthi Scheme | 2024 FREE

ಸ್ನೇಹಿತರೇ ಈ ಶ್ರಮ ಶಕ್ತಿ ಯೋಜನೆಯು(Shrama Shakthi Scheme) ಕರ್ನಾಟಕದಲ್ಲಿರುವಂತಹ ಎಲ್ಲಾ ಅಲ್ಪಸಂಖ್ಯಾತರಿಗೆ ಕೂಡ ಸಹ ಹಣ(money)ವನ್ನು ನೀಡುತ್ತದೆ. ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ. ನೀವು ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿಯನ್ನು ಮಾಡಬೇಕಾಗುತ್ತದೆ. ಈ ಶ್ರಮ ಶಕ್ತಿ ಯೋಜನೆಯನ್ನ (Shrama Shakthi Scheme) ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯು ಜಾರಿಗೊಳಿಸಿದೆ. ಇದು ಕೂಡ ಸರ್ಕಾರಿ ಯೋಜನೆಯಾಗಿದೆ. ಆದ್ದರಿಂದ ನೀವು ಈ ಯೋಜನೆಯ ಮೂಲಕ ₹50000/- ದವರೆಗೆ ಹಣವನ್ನು ನೀವು ಸುಲಭವಾಗಿ ಪಡೆಯಬಹುದು.

ಹೌದು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಮಾತ್ರ ಈ ಸಾಲ ದೊರೆಯುತ್ತದೆ. ಆದ ಕಾರಣ ಅಂತಹ ಅಭ್ಯರ್ಥಿಗಳು ನೀವಾಗಿದ್ದರೆ, ನೀವು ಕೂಡ ನಿಮ್ಮ ಸ್ವಂತ ವ್ಯಾಪಾರ(own business)ವನ್ನು ಪ್ರಾರಂಭಿಸಲು ಅಥವಾ ವ್ಯಾಪಾರ ಈಗಾಗಲೇ ಇದ್ದು, ಆ ವ್ಯಾಪಾರವನ್ನು ವಿಸ್ತರಿಸಲು ನೀವು ಕೂಡ ಈ ಶ್ರಮ ಶಕ್ತಿ ಯೋಜನೆಯನ್ನು (Shrama Shakthi Scheme) ಹಣವನ್ನ ಪಡೆಯಬಹುದು. ಈ ಯೋಜನೆ ಮೂಲಕ ನಿಮಗೆ ಸಬ್ಸಿಡಿ ಹಣ ಕೂಡ ಸಹ ದೊರೆಯುತ್ತದೆ. ಹಾಗೂ ಸಾಲದ ರೂಪದಲ್ಲೂ ಕೂಡ ಹಣ ದೊರೆಯುತ್ತದೆ ಅಂತ ಕೂಡ ಹೇಳಬಹುದು.

ಉದಾಹರಣೆಗೆ: ನೀವು ₹50,000/- ಹಣವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದರೆ, ನಿಮಗೆ 25% ಸಬ್ಸಿಡಿ ಹಣ ದೊರೆಯುತ್ತದೆ. ಇನ್ನು ಬಾಕಿ ಉಳಿದಂತಹ ₹25,000/- ಹಣವನ್ನು ಮಾತ್ರ 36 ತಿಂಗಳ ಒಳಗೆ ನೀವು ಪಾವತಿ ಮಾಡಬೇಕು ನೀವೇನಾದರೂ 36 ತಿಂಗಳ ಒಳಗೆ ಹಣವನ್ನು ಪಾವತಿಯನ್ನು ಮಾಡದಿದ್ದರೆ ನಿಮಗೆ ಸಬ್ಸಿಡಿ ಹಣ(Subsidy money)ವನ್ನು ಕೂಡ ಸಹ ನಿಮಗೆ ಸಿಗಲ್ಲ. ಅಂದರೆ ನೀವು ಪಡೆದಿರುವಂತಹ ₹50,000/- ಹಣವನ್ನು ಕೂಡ ಮರುಪಾವತಿ ಮಾಡಲೇಬೇಕಾಗುತ್ತದೆ. 4% ಬಡ್ಡಿ ದರದಲ್ಲಿ ಹಣ ನಿಮ್ಮ ಕೈ ಸೇರಲಿದೆ ಅಂತ ಕೂಡ ಹೇಳಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಏನು.?

  • ಅರ್ಜಿದಾರರ ಆಧಾರ್ ಕಾರ್ಡ್ (Aadhaar card)
  • ಅರ್ಜಿದಾರರ ವಯೋಮಿತಿಯ ಪ್ರಮಾಣ ಪತ್ರ
  • ಅರ್ಜಿದಾರರ KMDC ಯಿಂದ ಪಡೆದುಕೊಂಡಿರುವಂತಹ ಅರ್ಜಿ ನಮೂನೆ
  • ಅರ್ಜಿದಾರರ ಖಾಯಂ ವಿಳಾಸದ ಪ್ರಮಾಣ ಪತ್ರ
  • ಅರ್ಜಿದಾರರ ಬ್ಯಾಂಕ್ ಖಾತೆ ವಿವರ
  • ಅರ್ಜಿದಾರರ ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ ಅಥವಾ ಈಗಾಗಲೇ ಪ್ರಾರಂಭ ಮಾಡಿರುವಂತಹ ಸ್ವಂತ ಉದ್ಯೋಗದ ಮಾಹಿತಿ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳಿರಬೇಕು.?

  • ಅಲ್ಪಸಂಖ್ಯಾತ ಸಮುದಾಯದವಾಗಿರಬೇಕು.
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • 18 ರಿಂದ 55 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.
  • ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆಯಿರಬೇಕು.
  • ನಗರವಾಸಿಯ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು.

ಈ ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ?

ಹೌದು ಸ್ನೇಹಿತರೆ ಈ ಶ್ರಮ ಶಕ್ತಿ ಯೋಜನೆ (Shrama Shakthi Scheme) ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಲು KMDC ಕಚೇರಿಗಳಿಗೆ ಭೇಟಿಯನ್ನು ನೀಡಿ ಅರ್ಜಿಯನ್ನು ಕೂಡ ನೇರವಾಗಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಈ ಮೇಲೆ ತಿಳಿಸಿದಂತಹ ದಾಖಲೆಗಳನ್ನು ನೀವು ತೆಗೆದುಕೊಂಡು ಹೋಗಿ KMDC ಕಚೇರಿಯಲ್ಲಿ ನೀಡುವ ಅರ್ಜಿ ನಮೂನೆಯನ್ನು ಭರ್ತಿಯನ್ನು ಮಾಡಿ ಸಲ್ಲಿಕೆ ಮಾಡಬಹುದಾಗಿದೆ. ನೀವು KMDC ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕೂಡ ನೀವು ಆನ್ ಲೈನ್ ಮೂಲಕ ಕೂಡ ಅರ್ಜಿಯನ್ನ ಸಲ್ಲಿಸಬಹುದು ತುಂಬ ಸುಲಭವಾಗಿ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment