PM Vishwakarma Yojana: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇಂದು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಮತ್ತು ಶಕ್ತಿ ಯೋಜನೆ (Shakti Yojana) ರಾಜ್ಯದಲ್ಲಿ ಬಹಳಷ್ಟು ಹವಾವನ್ನು ಉಂಟು ಮಾಡಿದೆ. ಸ್ನೇಹಿತರೆ ಮಹಿಳೆಯರು ಸಕ್ರಿಯವಾಗಿ ಈ ಯೋಜನೆಗೆ ಧನಾತ್ಮಕ ಪ್ರತಿಕ್ರಿಯೆ ನೀಡ್ತಾ ಬರ್ತಾ ಇದ್ದಾರೆ.
ತಿಂಗಳಿಗೆ ಮನೆಯ ಹಿರಿಯ ಮಹಿಳೆಗೆ 2 ಸಾವಿರ ರೂ ನೀಡುವ ಮೂಲಕ ಆರ್ಥಿಕವಾಗಿ ಈ ಯೋಜನೆಯನ್ನು ಬಹಳಷ್ಟು ಮಹಿಳೆಯರಿಗೆ ನೆರವಾಗುತ್ತದೆ. ಈಗಾಗಲೇ ನೊಂದಣಿಯನ್ನು ಮಾಡಿದ ಮಹಿಳಾ ಫಲಾನುಭವಿಗಳ ಖಾತೆಗೆ ಹನ್ನೊಂದು ಕಂತಿನ ವರೆಗೆ ಹಣವು ಜಮೆಯಾಗಿದ್ದು ಇದೀಗ ಮಹಿಳೆಯರಿಗೆ ಗುಡ್ ನ್ಯೂಸ್ (Good news) ನೀಡಲು ಕೇಂದ್ರ ದಿಂದ ಹೊಸ ಯೋಜನೆಯನ್ನು ಜಾರಿ ಮಾಡಿದೆ.ಯಾವುದು ಈ ಯೋಜನೆ ಎಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
Table of Contents
PM Vishwakarma Yojana | ಗೃಹಲಕ್ಷ್ಮಿ ಗೆ ಸೆಡ್ಡು ಹೊಡೆಯಲು ಬಂತು ಕೇಂದ್ರದ ಹೊಸ ಯೋಜನೆ
ಇಂದು ಮಹಿಳೆಯರ ಉತ್ತೇಜನಕ್ಕಾಗಿ ಸರ್ಕಾರ ಹಲವು ರೀತಿಯ ಬೆಂಬಲ ನೀಡುತ್ತಿದೆ. ಆರ್ಥಿವಾಗಿಯು ಬೆಂಬಲ ನೀಡುತ್ತಿದೆ. ಮಹಿಳೆಯರು ಉದ್ಯೋಗವಂತರು ಆಗಬೇಕೆಂದು ಇದಕ್ಕಾಗಿ ಸ್ವ ಉದ್ಯಮ ತರಬೇತಿ ಹಾಗೂ ಇದಕ್ಕೆ ಸಹಾಯಧನವು ಇತ್ಯಾದಿ ನೀಡುತ್ತಿದೆ. ಅದೇ ರೀತಿ ಮನೆಯಲ್ಲೇ ಸ್ವ ಉದ್ಯಮವನ್ನು ಮಾಡಲು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಣೆಯನ್ನು ಕೂಡ ಮಾಡುತ್ತಿದೆ. ಈ ಸೌಲಭ್ಯ ವನ್ನು ಲಕ್ಷಾಂತರ ಮಹಿಳೆಯರು ಪಡೆದುಕೊಂಡಿದ್ದಾರೆ.
ಇಂದು ಟೈಲರಿಂಗ್‌ನಲ್ಲಿ ಆಸಕ್ತಿಯನ್ನು ಇದ್ದವರು ಮತ್ತು ಪ್ರತಿಭೆಯನ್ನ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ. ಆದರೆ ಬಹುತೇಕರಿಗೆ ಯಂತ್ರಗಳನ್ನ ಖರೀದಿಸಲು ಸಾಧ್ಯವಾಗುವುದಿಲ್ಲ.ಹಾಗಾಗಿ 2023-24 ರ ಸಾಲಿನಲ್ಲಿ ವೃತ್ತಿನಿರತ ಗ್ರಾಮೀಣ ಗುಡಿ ಕೈಗಾರಿಕೆ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿಯು ಹಾಕಬಹುದಾಗಿದೆ. ಯೋಜನೆಯಡಿಯಲ್ಲಿ, ಹೊಲಿಗೆ ಯಂತ್ರಗಳನ್ನು ಖರೀದಿಸಲು ರೂ 15000 ವರೆಗೆ ಮಹಿಳೆಯರಿಗೆ ಸಹಾಯಧನವನ್ನು ನೀಡಲಾಗುತ್ತದೆ.
PM Vishwakarma Yojana ಈ ಅರ್ಹತೆ ಬೇಕು
- ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿದಾರರು ಭಾರತದ ನಾಗರಿಕರಾಗಿದ್ದರೆ ಅರ್ಜಿ ಹಾಕಬಹುದಾಗಿದೆ.
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುವ ಯಾರಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಅರ್ಜಿದಾರ ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.
- ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಈ ದಾಖಲೆ ಬೇಕು:
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರರ ರೇಷನ್ ಕಾರ್ಡ್
- ಅರ್ಜಿದಾರರ ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
- ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಅರ್ಜಿದಾರರ ಜಾತಿ ಪ್ರಮಾಣ ಪತ್ರ
- ಅರ್ಜಿದಾರರ ಆದಾಯ ಪ್ರಮಾಣ ಪತ್ರ
ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing Machine Scheme) ಗೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್‌ಸೈಟ್ https://pmvishwakarma.gov.in ಗೆ ಹೋಗಿ ನೋಂದಾವಣೆ ಮಾಡಿಕೊಳ್ಳಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು